ರುಚಿ ರುಚಿಯ ಕೋಸಂಬರಿ ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ರೆಸಿಪಿ.

ಕೋಸಂಬರಿ ಶುಭ ಕಾರ್ಯದಲ್ಲಿ ಇರಲೇಬೇಕಾದ ಒಂದು ಖಾದ್ಯ. ಸಸ್ಯಹಾರಿ ಊಟದಲ್ಲಿ ಕೋಸಂಬರಿಯೇ ಪ್ರಮುಖ ಖಾದ್ಯ. ಅದರಲ್ಲೂ ಊಟ ಆರಂಭವಾಗೋದೇ ಕೋಸಂಬರಿಯ ರುಚಿ ನೋಡುವುದರಿಂದ. ಹೀಗಾಗಿ ಕೋಸಂಬರಿ ಅನ್ನೋದು ಪ್ರತಿ ಅಡುಗೆ, ಹಬ್ಬ, ಸಮಾರಂಭದ ಮೂಲವಾಗಿದೆ.

ಈ ಕೋಸಂಬರಿಯಲ್ಲಿ ಹಲವು ವಿಧಗಳಿವೆ. ಕಡಲೆ ಬೇಳೆ ಕೋಸಂಬರಿ ಕರ್ನಾಟಕದ ವಿಶೇಷ ಶೈಲಿಯ ಕೋಸಂಬರಿಯಾಗಿದೆ. ಸೌತೆಕಾಯಿ, ಕ್ಯಾರೆಟ್/ಗಜರಿ, ಕಡಲೇ ಬೇಳೆ ಮತ್ತು ತೆಂಗಿನ ತುರಿಯ ಸಮ್ಮಿಶ್ರಣದಿಂದ ಮಾಡಲಾಗುವ ಕೋಸಂಬರಿ ರುಚಿಯಲ್ಲು ಮೇಲುಗೈ. ದೇವರ ಪೂಜೆ, ನೈವೇದ್ಯದಲ್ಲಿ ಕೋಸಂಬರಿ ಇರಲೇಬೇಕು.

ಕೋಸಂಬರಿಯನ್ನು ಮಾಡೋದು ಸಹ ತುಂಬಾನೆ ಸುಲಭ. ಅಲ್ಲದೆ ಇದಕ್ಕಾಗಿ ಅಧಿಕ ಸಮಯವೂ ಬೇಕಿಲ್ಲ. ಬೇಳೆಯನ್ನು ನೆನೆಸಿಕೊಂಡಿದ್ದರೆ ಬೇಕೆಂದಾಗ ಕೆಲವೇ ನಿಮಿಷಗಳಲ್ಲಿ ತಯಾರಿಸಬಹುದು. ಕೋಸಂಬರಿಯನ್ನು ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವುದು ಹೇಗೆ? ಮಾಡಲು ಪಾಕವಿಧಾನ ಏನು? ಎಷ್ಟು ಸಮಯದಲ್ಲಿ ಮಾಡಬಹುದು ಎಂಬು ಕುರಿತ ಮಾಹಿತಿ ಇಲ್ಲಿದೆ ನೋಡಿ.

ಬೇಕಾಗುವ ಪದಾರ್ಥಗಳು: 

ಹಸರು ಬೇಳೆ- 1/4 ಕಪ್ 

ಕ್ಯಾರೆಟ್ (ಕತ್ತರಿಸಿದ) - 2 

ಬೀನ್ಸ್ (ಕತ್ತರಿಸಿದ) - 10 

ಎಲೆಕೋಸು (ಕತ್ತರಿಸಿದ) - 1 ಕಪ್ 

ಸಾಸಿವೆ - 1/4 ಟೀಸ್ಪೂನ್ 

ಜೀರಿಗೆ - 1/4 ಟೀಸ್ಪೂನ್ 

ಕಡಲೆ - 1 ಟೀಸ್ಪೂನ್

 ಉದ್ದು - 1 ಟೀಸ್ಪೂನ್

 ಬೆಳ್ಳುಳ್ಳಿ (ಪುಡಿಮಾಡಿದ) - 5 

ಕೆಂಪು ಮೆಣಸಿನಕಾಯಿ - 2 

ಹಸಿರು ಮೆಣಸಿನಕಾಯಿ - 6 

ಈರುಳ್ಳಿ (ಕತ್ತರಿಸಿದ) - 1 

ತೆಂಗಿನಕಾಯಿ (ರುಬ್ಬಿದ) - 1 

ಕಪ್ ಕರಿಬೇವಿನ ಎಲೆಗಳು - 2 tbs 

ಕೊತ್ತಂಬರಿ ಸೊಪ್ಪು - 1/4

 ಕಪ್ ಇಂಗು - 2 

ಪಿಂಚ್ಗಳು ರುಚಿಗೆ ಉಪ್ಪು ಅಡುಗೆ ಎಣ್ಣೆ 

ಕೋಸಂಬರಿ ಮಾಡುವುದು ಹೇಗೆ:
ಹೆಸರು ಬೇಳೆಯನ್ನ ನೀರಿನಲ್ಲಿ ತೊಳೆದು ಬಳಿಕ ಒಂದು ಪಾತ್ರೆಗೆ ಹಾಕಿ ಅದಕ್ಕೆ ನೀರು ಹಾಕಿ ಬೇಯಿಸಲು ಇಡಿ. ಇದಕ್ಕೆ ಬೀನ್ಸ್, ಕ್ಯಾರೆಟ್, ಕೋಸು ಹಾಕಿಕೊಂಡು ಬೇಯಿಸಿಕೊಳ್ಳಿ. 10ರಿಂ 15 ನಿಮಿಷ ಬೇಯಿಸಿಕೊಳ್ಳಿ. ಮತ್ತೊಂದು ಪಾತ್ರೆಯಲ್ಲಿ ಎಣ್ಣೆ ಇಟ್ಟು ಅದಕ್ಕೆ ಸಾವಿಗೆ, ಜೀರಿಗೆ ಹಾಕಿಕೊಳ್ಳಿ. ಇದಕ್ಕೆ ಕಡಲೆಬೇಳೆಮ ಉದ್ದಿನ ಬೇಳೆ ಹಾಕಿ ಫ್ರೈ ಮಾಡಿಕೊಳ್ಳಿ. ಇದಕ್ಕೆ ಬೆಳ್ಳುಳ್ಳಿ, ಒಣ ಮೆಣಸು ಹಾಗೂ ಹಸಿ ಮೆಣಸು ಸಿಗಿದುಕೊಂಡು ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಇದಕ್ಕೆ ಈರುಳ್ಳಿ, ಕರಿಬೇವು ಹಾಕಿ ಫ್ರೈ ಮಾಡಿಕೊಳ್ಳಿ. 2 ನಿಮಿಷ ಫ್ರೈ ಆದ ಬಳಿಕ ಇದಕ್ಕೆ ಇಂಗು ಹಾಕಿಟ್ಟು ಬಿಡಿ. 1 ನಿಮಿಷದ ಬಳಿಕ ಬೇಯಿಸಿಕೊಂಡಿರುವ ಬೇಳೆ, ತರಕಾರಿಯನ್ನು ಹಾಕಿಕೊಂಡು ಮಿಕ್ಸ್ ಮಾಡಿ ಫ್ರೈ ಮಾಡಿಕೊಳ್ಳಿ. ಇದಕ್ಕೆ ಉಪ್ಪು ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಕೊನೆಯದಾಗಿ ಕೊಬ್ಬರಿ ತುರಿಯನ್ನು ಹಾಕಿಕೊಳ್ಳಿ. ಇದಾದ ಬಳಿಕ ಕೊನೆಯದಾಗಿ ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸ್ ಮಾಡಿ. ಇಷ್ಟಾದರೆ ನಿಮ್ಮ ಮುಂದೆ ಕೋಸಂಬರಿ ರೆಡಿಯಾಗಿರುತ್ತದೆ. ಇದೊಂದು ಪಲ್ಯದ ರೀತಿ ನೀವು ಸವಿಯಬಹುದು.

ಇದನ್ನು ಬರಿ ಬಾಯಿಗೆ, ಅನ್ನ, ಚಪಾತಿ ಸೇರಿ ಎಲ್ಲಾ ತಿಂಡಿಯ ಜೊತೆಗೂ ಸವಿಯಬಹುದು, ನಿಮಗೆ ಮಸಾಲೆ ರೀತಿ ಸವಿಯಬೇಕಾದರೆ ಯಾವುದಾದರು ಚಾಟ್ ಮಸಾಲವನ್ನು ಇದಕ್ಕೆ ಸೇರಿಸಿ ತಯಾರಿಸಬಹುದು. ಕೆಲವು ಬಾರಿ ಇದಕ್ಕೆ ಸೌತೇಕಾಯಿ ಸಹ ಹಾಕಿ ಮಾಡಬಹುದು.